ಕಿಯೋನಿಕ್ಸ್ ಗೆ ಸುಸ್ವಾಗತ

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್), ಐ ಎಸ್ ಒ 9001:2015 ಪ್ರಮಾಣಿತ ಸಂಸ್ಥೆ. ಕಿಯೋನಿಕ್ಸ್ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮಗಳನ್ನು ಉತ್ತೇಜಿಸಲು ಹಾಗೂ ಈ ಉದ್ಯಮಗಳನ್ನು ಎಲ್ಲಾ ಕಾಲದಲ್ಲೂ ಮುಂಚಣಿಯಲ್ಲಿಟ್ಟು ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣ ಹರಡುವ, ರಾಜ್ಯದ ಇ-ಅಡಳಿತ ಸೇವೆಗಳನ್ನು ಒದಗಿಸುವ ಮೂಲ ಉದ್ದೇಶವನ್ನಿಟ್ಟು ಕೊಂಡು 1976ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಕಿಯೋನಿಕ್ಸ್ ರಾಜ್ಯದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳಿಗೆ ವಿಶ್ವದರ್ಜೆಯ ಮೂಲಭೂತ  ಸೌಕರ್ಯಗಳನ್ನು ಒದಗಿಸಲು ಬದ್ದವಾಗಿರುತ್ತದೆ. ಎಸ್ ಟಿ ಪಿ ಐ ಸಂಸ್ಥೆಯ ಸಹಯೋಗದೊಂದಿಗೆ ಮಾಹಿತಿ ತಂತ್ರಜ್ಞಾನ ಉದ್ಯಮಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದು ಹಾಗೂ ರಫ್ತು ಆಧಾರಿತ ಯೋಜನೆಗಳನ್ನು ಉತ್ತೇಜಿಸಲು ಸಹಕಾರ ನೀಡುತ್ತಿದೆ.

ನಿಗಮವು ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ ,ಬಿಹಾರ್ ಸರ್ಕಾರ, ಅರುಣಾಚಲ ಪ್ರದೇಶ ಸರ್ಕಾರ ಮತ್ತು ಬೇರೆ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಮಾಹಿತಿ ತಂತ್ರಜ್ಞಾನ ತಂತ್ರಾಶ, ಇ-ಆಡಳಿತ ಯೋಜನೆ ಆನುಷ್ಠಾನ ಸೇರಿದಂತೆ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸುತ್ತಿದೆ. ಕಂಪ್ಯೂಟರ್ ಹಾರ್ಡ್ ವೇರ್, ಸಾಪ್ಟ್ ವೇರ್, ವಿದ್ಯುನ್ಮಾನ ಮತ್ತು ಸೋಲಾರ್ ಉಪಕರಣಗಳನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಸರಬರಾಜು ಮಾಡುತ್ತಿದೆ. ಅದೇ ರೀತಿ ಸರ್ಕಾರಿ ಸಂಸ್ಥೆಗಳಿಗೆ ಇ - ಟೆಂಡೆರ್ ವ್ಯವಸ್ಥೆಗಾಗಿ ಟೆಂಡೆರ್ ವಿಜಾರ್ಡ ಎಂಬ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದೆ.

ಶ್ರೀ. ಸಿದ್ದರಾಮಯ್ಯ

ಮಾನ್ಯ. ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಶ್ರೀ. ಪ್ರಿಯಾಂಕ್ ಖರ್ಗೆ

ಸಚಿವರು -  ಐಟಿ, ಬಿಟಿ  ಮತ್ತು  ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್, ಕರ್ನಾಟಕ ಸರ್ಕಾರ

ಶ್ರೀ ಶರತ್‌ ಕುಮಾರ್‌ ಬಚ್ಚೇಗೌಡ

  ಅಧ್ಯಕ್ಷರು - ಕಿಯೋನಿಕ್ಸ್  ಹಾಗೂ   ಮಾನ್ಯ ವಿಧಾನಸಭಾ ಸದಸ್ಯರು   ಹೊಸಕೋಟೆ ವಿಧಾನಸಭಾ ಕ್ಷೇತ್ರ.   

ಶ್ರೀ. ಪವನ್‌ ಕುಮಾರ್‌ ಮಲಪಾಟಿ, ಭಾ.ಆ.ಸೇ

ವ್ಯವಸ್ಥಾಪಕ ನಿರ್ದೇಶಕರು, ಕಿಯೋನಿಕ್ಸ್  

ಟೆಂಡರುಗಳು

ನಮ್ಮ ಸೇವೆಗಳು

ಕಿಯೋನಿಕ್ಸ್, ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮವನ್ನು ಪ್ರವರ್ಧಮಾನಕ್ಕೆ ತರುವ ಉದ್ದೇಶದಿಂದ ೧೯೭೬ ರಲ್ಲಿ ಹುಟ್ಟಿಕೊಂಡಿತು. ವಿದ್ಯುನ್ಮಾನ ಉದ್ಯಮಗಳ ಉತ್ಪನ್ನಗಳನ್ನು ಪ್ರವರ್ಧಮಾನಕ್ಕೆ ತರಲು ELCOMEX ನಂತಹ ಪ್ರದರ್ಶನಗಳನ್ನು ನಡೆಸಲಾಯಿತು.

ಮಾಹಿತಿ ತಂತ್ರಜ್ಞಾನ ಶಿಕ್ಷಣ

ಕಿಯೋನಿಕ್ಸ್ ನ ಐಟಿಈಎಸ್ ವಿಭಾಗವು, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ 289 ತರಬೇತಿ ಕೇಂದ್ರಗಳನ್ನು ಕರ್ನಾಟಕದಾದ್ಯಂತ ಹೊಂದಿರುತ್ತದೆ.

ಮುಂದೆ ಓದಿ

ಐಟಿ ಮೂಲಭೂತ ಸೌಕರ್ಯ

ಕಿಯೋನಿಕ್ಸ್, ಏಷಿಯಾದಲ್ಲಿ ಮೊದಲ ಎಲೆಕ್ಟ್ರಾನಿಕ್ ಸಿಟಿ ಸ್ಥಾಪಿಸಿದ ಸಂಸ್ಥೆಯಾಗಿದೆ. ಬೆಂಗಳೂರು ನಗರವನ್ನು 'ಭಾರತದ ಸಿಲಿಕಾನ್ ವ್ಯಾಲಿ'ಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮುಂದೆ ಓದಿ

ಮಾನವ ಸಂಪನ್ಮೂಲ

ಕಿಯೋನಿಕ್ಸ್ ಕೈಗೊಂಡ ಚಟುವಟಿಕೆಗಳಲ್ಲಿ ಮಾನವ ಸಂಪನ್ಮೂಲ ಸರಬರಾಜು ಹಾಗೂ ನಿರ್ವಹಣೆ ಪ್ರಮುಖವಾಗಿದ್ದು. ಐಟಿ ಮಾನವ ಸಂಪನ್ಮೂಲ ಒದಗಿಸುವ ಸೇವೆಯಲ್ಲಿ, ಡೇಟಾ ಎಂಟ್ರಿ ಅಪರೇಟರ್.. . . .

ಮುಂದೆ ಓದಿ

ಐಟಿ ಸೇವೆಗಳು

ನಾವು ಸಮಗ್ರ ವ್ಯಾಪ್ತಿಯ ಐಟಿ ಮತ್ತು ಆಟೊಮೇಷನ್ ಸಲಹಾ ಸೇವೆಗಳನ್ನು ಒದಗಿಸುತ್ತೇವೆ. ಕರ್ನಾಟಕದ ಇತಿಹಾಸದಲ್ಲಿ ನಾವು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇದರಲ್ಲಿ ನಮಗೆ 25 ವರ್ಷಗಳ ಅನುಭವವಿದೆ.

ಮುಂದೆ ಓದಿ

ಮೇನ್ ಫ್ರೇಮ್ ಸೇವೆಗಳು

ಕಿಯೋನಿಕ್ಸ್ ಸಂಸ್ಥೆಯು ಕರ್ನಾಟಕ ಸರ್ಕಾರದ ಐಟಿ ನೋಡಲ್ ಏಜನ್ಸಿಯಾಗಿದ್ದು,  ಕಿಯೋನಿಕ್ಸ್ ಸಂಸ್ಥೆಯ ತರಬೇತಿ ಸೇವೆಗಳನ್ನು ವಿಸ್ತರಿಸುವ ಹಾಗೂ ಉದ್ಯೋಗಾಧಾರಿತ ತರಿಬೇತಿಯನ್ನ ನಡೆಸುವ ನಿಟ್ಟಿನಲ್ಲಿ ಐಬಿಎಮ್ ಮೇನ್ ಫ್ರೇಮನ್ನು (ZBC12) ಖರೀದಿಸಿದೆ.

ಮುಂದೆ ಓದಿ

ಫೋಟೋ ಗ್ಯಾಲರೀ