ನಮ್ಮ ಕನ್ಸಲ್ಟೆನ್ಸಿ ಸೇವೆಗಳು:

  1. ನೆಟ್ವರ್ಕಿಂಗ್,
  2. ಸಾಫ್ಟ್-ವೇರ್ ಅಭಿವೃದ್ಧಿ,
  3. ವೆಬ್ ಸಲ್ಯೂಶನ್ಸ್,

ನಾವು ಸಮಗ್ರ ಮಾಹಿತಿ ತಂತ್ರಜ್ಞಾನ ಮತ್ತು ಸ್ವಯಂಚಾಲಿತ ಕನ್ಸಲ್ಟೆನ್ಸಿ ಸೇವೆಗಳನ್ನು ಒದಗಿಸುತ್ತೇವೆ. ಕಿಯಾನಿಕ್ಸ್ , ಕರ್ನಾಟಕದಲ್ಲಿ ಹಲವು ಮುಖ್ಯ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು, ಸುಮಾರು ೨೫ ವರ್ಷದ ಪರಿಣತಿ ಹೊಂದಿದೆ.

ನೆಟ್ವರ್ಕಿಂಗ್

ಉತ್ತಮ ತರೆಬೇತಿ ಹಾಗೂ ಅನುಭವ ಹೊಂದಿರುವ ಸಿಬ್ಬಂದಿಯು, ಕಂಪ್ಯೂಟರ್ ನೆಟ್ವರ್ಕಿಂಗ್ ಮತ್ತು ನೆಟ್ವರ್ಕ್ ನಿರ್ವಹಣೆಯ ಪರಿಹಾರಗಳನ್ನು ನೀಡುತ್ತಾರೆ. ಈ ಸೇವೆಗಳನ್ನು ಕರ್ನಾಟಕದಾದ್ಯಂತ ಕಿಯಾನಿಕ್ಸ್ ಮೂಲಕ ಅಥವಾ ವ್ಯವಹಾರ ಸಹವರ್ತಿಗಳ ಮೂಲಕ ಒದಗಿಸಲಾಗುತ್ತದೆ. ಪ್ರಸ್ತುತ, ನಾವು ರಾಜ್ಯ ಸರ್ಕಾರಕ್ಕೆ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಕಂಪ್ಯೂಟರ್ಗಳ ಮತ್ತು ಕಂಪ್ಯೂಟರ್ ಪೆರಿಫೆರಲ್ ಗಳ, ವಾರ್ಷಿಕ ನಿರ್ವಹಣಾ ಕಾರ್ಯವನ್ನು ಒದಗಿಸುತ್ತಿದ್ದೇವೆ.

ನಾವು cctv, ಕಣ್ಗಾವಲು ಉಪಕರಣಗಳ ಹಾಗೂ ಭದ್ರತಾ ವ್ಯವಸ್ಥೆಗಳ, ವಿನ್ಯಾಸ, ಅನುಸ್ಥಾಪನೆ ಹಾಗೂ ನಿರ್ವಹಣೆಯ ಸಾಮರ್ಥ್ಯವನ್ನು ಕೂಡ ಹೊಂದಿದ್ದೇವೆ.

ಸಾಫ್ಟ್ವೇರ್

ನಾವು ಸಾಫ್ಟ್ವೇರ್ ಆಪ್(Application)ಗಳನ್ನು ಅಭಿವೃದ್ಧಿಪಡಿಸುವ ಆಂತರಿಕ ಪರಿಣತಿ ಹಾಗೂ ಸಾಮರ್ಥ್ಯವನ್ನು ಹೊಂದಿದ್ದೇವೆ. ಕಿಯಾನಿಕ್ಸ್ ಹಲವಾರು ಸಾಫ್ಟ್ವೇರ್ ಆಪ್(Application)ಗಳನ್ನು ಅಭಿವೃದ್ಧಿಪಡಿಸಿದೆ.

ನಮ್ಮ ವೆಬ್ ಪರಿಹಾರ ವಿಭಾಗವು ಪ್ರತ್ಯೇಕವಾಗಿ ವೆಬ್-ಸೈಟ್ ಗಳ ಸೃಷ್ಟಿ, ಹೋಸ್ಟಿಂಗ್ ಮತ್ತು ನಿರ್ವಹಣೆಯ ಕಾರ್ಯಗಳನ್ನು ಮಾಡುತ್ತದೆ. ಕಿಯಾನಿಕ್ಸ್ ಹಲವು ಸರ್ಕಾರಿ ಇಲಾಖೆಗಳ ವೆಬ್-ಸೈಟ್ ಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ನಿರ್ವಹಿಸುತ್ತಿದೆ.

ಕಿಯಾನಿಕ್ಸ್ ದೊಡ್ಡ ಪ್ರಮಾಣದ 'ಡಾಟಾ ಎಂಟ್ರಿ' ಹಾಗೂ 'ಡಾಟಾ ವೇರ್-ಹೌಸಿಂಗ್' ಯೋಜನೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿದೆ. ಜನಗಣತಿ ಇಲಾಖೆ, ಸಣ್ಣ ಉಳಿತಾಯ ಮತ್ತು ರಾಜ್ಯ ಲಾಟರಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕೇಂದ್ರ ಕಾರಾಗೃಹ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ನೀರು ಸರಬರಾಜು ಮತ್ತು ಕೊಳಚೆನೀರು ಮಂಡಳಿ ಮತ್ತು ಶಿಕ್ಷಣ ಇಲಾಖೆ ಮುಂತಾದ ಗ್ರಾಹಕರ ಯೋಜನೆಗಳನ್ನು ನಿರ್ವಹಿಸಲಾಗಿದೆ.

ಮುಖ್ಯ ಯೋಜನೆ- e-procurement ಪರಿಹಾರ

ಕರ್ನಾಟಕ ಸರ್ಕಾರದ ಇಲಾಖೆಗಳಿಗೆ, ಇ-ಆಡಳಿತ ಪರಿಹಾರಗಳನ್ನು ಒದಗಿಸುವ ಉದ್ದೇಶದಿಂದ, ಕಿಯಾನಿಕ್ಸ್ ಇ-ಟೆಂಡರ್ / ಇ-ಪ್ರೊಕ್ಯೂರ್ಮೆಂಟ್ ಸಾಫ್ಟ್-ವೇರ್, ಕಾರ್ಯ ನಿರ್ವಹಣಾ ಸಾಫ್ಟ್-ವೇರ್, ವೇತನ ಪಟ್ಟಿ ಸಾಫ್ಟ್-ವೇರ್ ಇತ್ಯಾದಿ ಸಾಫ್ಟ್-ವೇರ್ಗಳನ್ನು ಪರಿಚಯಿಸಿದೆ. ಈ ಸಾಫ್ಟ್-ವೇರ್ ಗಳನ್ನು, ವೆಬ್ ಆಧಾರಿತ ತಂತ್ರಜ್ಞಾನದ ಪರಿಹಾರಗಳನ್ನು ನೀಡುವಲ್ಲಿ ಪ್ರಮುಖ ಸಂಸ್ಥೆಯಾದ ಮೆ. ಆಂಟಾರಿಸ್ ಸಿಸ್ಟಮ್ಸ್ ಲಿಮಿಟೆಡ್ ನೊಂದಿಗೆ ತಾಂತ್ರಿಕ ಟೈ ಆಪ್ ಮಾಡಿಕೊಂಡು ಅಭಿವೃದ್ಧಿ ಪಡಿಸಲಾಗಿದೆ.

೨೦೦೨ ರಲ್ಲಿ, ರಾಜ್ಯದಲ್ಲಿ ಮೊಟ್ಟ ಮೊದಲ ಭಾರಿಗೆ ಈ ಯೋಜನೆಯನ್ನು ಕೃಷ್ಣ ಭಾಗ್ಯ ಜಲಾ ನಿಗಮ ಲಿಮಿಟೆಡ್ ನಲ್ಲಿ ಪರಿಚಯಿಸಲಾಯಿತು. ಈಗ 25 ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು / ಸಂಸ್ಥೆಗಳು ಈ ಪರಿಹಾರವನ್ನು ಬಳಸುತ್ತಿವೆ. ಅಂತರ್ಜಾಲ ಆಧಾರಿತ "TENDERWIZARD" ಆಪ್ ಅನ್ನು, ವೆಬ್ ಸಶಕ್ತ ಟೆಂಡರ್ ವ್ಯವಸ್ಥೆಗಳಿಗೆ ಅಭಿವೃದ್ಧಿ ಪಡಿಸಲಾಗಿದೆ, ಈ ಆಪ್ ಸರಕುಗಳನ್ನು ಗಳಿಸುವಲ್ಲಿ ಸ್ವಯಂಚಾಲನೆ ಹಾಗೂ ಪಾರದರ್ಶಕತೆಯನ್ನು ತರುತ್ತದೆ.

ಕಿಯೋನಿಕ್ಸ್ ಸಂಸ್ಥೆಯು 2003ರಿಂದ ನೆಟ್ ವರ್ಕಿಂಗ್ ಸೇವೆಯನ್ನು ಪ್ರಾರಂಭಿಸಿತು.ಇದಕ್ಕಾಗಿ ಮೀಸಲಾದ ಆಂತರಿಕ ತಂಡವು ಗ್ರಾಹರ ಅಗತ್ಯಗಳಪೊರೈಕೆಗೆ ಬೇಕಾದತರಬೇತಿ ಮತ್ತು ಪ್ರಾಮಿಣ್ಯತೆಯನ್ನು ಹೊಂದಿದೆ ಹಾಗೊ ಈ ತಂಡವು ನೆಟ್ ವರ್ಕಿಂಗ್ ಸಂಬಂದ ಪಟ್ಟ ಯೋಜನೆ, ವಿನ್ಯಾಸ ಹಾಗೊ ಬೆಂಬಲ ಸೇವೆಗಳನ್ನು ಒದಗಿಸುತ್ತದೆ. ಕಿಯೋನಿಕ್ಸ್ ಸಂಸ್ಥೆಯು ನೆಟ್ ವರ್ಕಿಂಗ್ ಸೇವೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅಗತ್ಯವಾದ ಪ್ರಮಾಣೀಕರಿಸಿದ ಆಧುನಿಕ ಉಪಕರಣಗಳನ್ನು ಹೊಂದಿದೆ ಮತ್ತು ಅತ್ಯುತ್ತಮ ಪದ್ದತಿಗಳನ್ನು ಅನುಸರಿಸುತ್ತದೆ. ಗ್ರಾಹಕರೊಂದಿಗಿನ ನಿರಂತರ ವಿಚಾರ ವಿನಿಮಯಗಳು ದುಬಾರಿ ಸಂಪನ್ಮೊಲಗಳನ್ನು ಮಿತ ವ್ಯಯಕಾರಿಯಾಗಿ ಹಗೊ ಸಮರ್ಪಕವಾಗಿ ಬಳಸಿ ಪರಿಣಾಮಕಾರಿಯಾದ ಸೇವೆಗಳನ್ನು ಒದಗಿಸಲು ಸಾದ್ಯವಾಗುತ್ತಿದೆ.

ನೆಟ್ ವರ್ಕಿಂಗ್ ನಲ್ಲಿ ಕಾಪರ್ ಮತ್ತು ಫೈಬರ್ ಕೇಬಲ್ ನೆಟ್ ವರ್ಕ ಹಾಗೊ ನಿಸ್ತಂತು ನೆಟ್ ವರ್ಕಗಳನ್ನು ಮಾಡಲಾಗುತ್ತದೆ. ಕಿಯೋನಿಕ್ಸ್ ಸಂಸ್ಥೆಯ ತಂಡವು ಇಥರ್ ನೆಟ್ ಕ್ಯಾಂಪಸ್ ನೆಟ್ ವರ್ಕ ವಿನ್ಯಾಸ ಹಾಗೊ ನಿರ್ವಹಣಿಯ ಅನುಭವವನ್ನು ಹೊಂದಿದೆ.ಕಷ್ಟ ಸಾಧ್ಯವಾದ ಪ್ರದೇಶಗಳಲ್ಲಿ ಹಾಗೊ ಮೊಬೈಲ್ ಮತ್ತು ಲ್ಯಾಬ್ ಟಾಪ್ ಗಳಿಗೆ ನೆಸ್ತಂತು ನೆಟ್ ವರ್ಕ ಗಳನ್ನು ಅ/ಲವಡಿಸುತ್ತೇವೆ. ಕಿಯೋನೆಕ್ಸಿ ಸಂಸ್ಥೆಯ WAN ಅಳವಡಿಕೆಯಲ್ಲಿ leased line, MPLS VPN ಮುಂತಾದವುಗಳ ಬಳಕೆಯಿಂದ ವಿಶ್ವಾಸಾರ್ಹ ಹಾಗೊ ಪರಿಮಕಾರಿ ನೆಟ್ ವರ್ಕ ಸೇವೆಯನ್ನು ವಿವಿಧ ಪ್ರದೇಶಹಳಿಗೆ ಒದಗಿಸುತ್ತದೆ. 

ತಂತ್ರಾಂಶ ನಿರ್ವಹಣೆ ಹಾಗೊ ಅಭಿವೃದ್ದಿ ಕ್ಷೇತ್ರಗಳಲ್ಲಿ 10 ವರ್ಷಗಳ ಅನುಭವವಿರೊತ್ತದೆ. ಮಾರುಕಟ್ಟೆ ಸಮಾಲೋಚನೆ,ಪ್ರೊಜೆಕ್ಟ ಯೋಜನೆ, ಸಿಸ್ಟಂ ವಿಶ್ಲೇಷಣೆ, ಮಾರುಕಟ್ಟೆ ವಿಶ್ಲೇಷಣೆ, ಕಸ್ಟಮ್ ಸಾಫ್ಟ್ವೇರ್ ಪರಿಹಾರಗಳು, ಡಾಟಾಬೇಸ್ ವಿನ್ಯಾಸ, ಪ್ರೋಗ್ರಾಮಿಂಗ್,ಬಳಕೆದಾರ ಇಂಟರ್ ಫೇಸ್ ಅನುಷ್ಠಾನ, ಈ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ.ತಂತ್ರಾಂಶ ಅಭಿವೃದ್ಧಿಪಡಿಸಿ ಅಂತರಿಕ ಹಾಗೂ ಬಾಹ್ಯ ಬಳಕೆದಾರರ ಅಗತ್ಯಗಳಿಗೆ ಇಂಟರ್ ನೆಟ್ ಶಕ್ತಗೊಂಡ ಪರಿಹಾರಗಳನ್ನು ಪೂರೈಸುತ್ತದೆ. ತಂತ್ರಾಂಶ ಅಭಿವೃದ್ಧಿ ಯೋಜನೆಗಳನ್ನು ಕಿಯೋನಿಕ್ಸ್ ತನ್ನಲಿರುವ ಆಂತರಿಕ ಸಂಪನ್ಮೊಲ ಮೂಲಕ ಅಥವಾ ಅನುಭವಿ ಬಾಹ್ಯ ಸಂಘ ಸಂಸ್ಥೆಗಳ ಸಹಬಾಗಿತ್ವದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ. ಕಿಯೋನಿಕ್ಸ್ ಹಾಗೂ ಪಾಲುದಾರಿಕೆ ಸಾಫ್ಟ್ವೇರ್ ಸಂಸ್ಥೆಗಳ ಸಹಯೋಗದೊದಿಗೆ ತಂತ್ರಾಂಶ ಅಭಿವೃದ್ದಿ ಕ್ಷೇತ್ರದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ನಮ್ಮ ಎಲ್ಲಾ ತಂತ್ರಾಂಶ ಅಭಿವೃದ್ಧಿ ಚಟುವಟಿಕೆಗಳಿಗೆ ಅತ್ಯುತ್ತಮ ಆಚರಣೆಗಳುನ್ನು ಅನುಸರಿಸುತಿದ್ದೇವೆ.

VB.net,C#.net,asp.net, ಜಾವಾ ಇತ್ಯಾದಿ.,. ಮುಂತಾದ ತಂತ್ರಾಂಶ ಅಭಿವೃದ್ಧಿ ಕ್ಷೇತ್ರದಲ್ಲಿ ಕಿಯೋನಿಕ್ಸ್ ಸಾಮರ್ತ್ಯಹೊಂದಿದೆ. ಎಕ್ಲಿಪ್ಸ್ ,ವಿಷುಯಲ್ ಸ್ಟುಡಿಯೋ .NET ನಂತಹ ಜನಪ್ರಿಯ ಟೂಲ್ ಗಳನ್ನು ಬಳಸುತ್ತಿದೆ.ತಂತ್ರಾಂಶ ಅಭಿವೃದ್ದಿಯನ್ನು ಎಂಎಸ್ SQL, ಒರಾಕಲ್, MySQL, PostGre SQL , ಡೇಟಾಬೇಸ್ ನಂತಹ ತಂತ್ರಾಂಶಗಳ ಮೂಲಕ ಕಾರ್ಯಗತಗೊಳಿಸಲಾಗುವುದು .ತಂತ್ರಾಂಶ ಪರಿಹಾರಗಳನ್ನು ವಿಂಡೋಸ್ ಮತ್ತು ಲಿನಕ್ಸ್ ಪರಿಸರದ ಅಡಿಯಲ್ಲಿ ನೀಡಬಹುದಾಗಿದೆ.

ಕಿಯೋನಿಕ್ಸ್ ಸೋಸ್ಥೆಯಲ್ಲಿ ವೆಬ್ ವಿನ್ಯಾಸ ಮತ್ತು ಅಪ್ಲಿಕೇಶನ್ ಅಭಿವೃದ್ಧಿಯು ಪ್ರಮುಖ ಚಟುವಟಿಕೆಗಳಲ್ಲಿ ಒಂದು . ವೆಬ್ ಅಭಿವೃದ್ಧಿ ಮತ್ತು ವೆಬ್ ಅಪ್ಲಿಕೇಶನ್ಗಳನ್ನು ವಿನ್ಯಾಸ ಮತ್ತು ಅಭಿವೃದ್ಧಿ ಕೈಗೆತ್ತಿಕೊಳ್ಳಲು ವೃತ್ತಿಪರ ತಂಡಗಳನ್ನು ಅಭಿವೃದ್ಧಿಪಡಿಸಿ, ಈ ಕ್ಷೇತ್ರಕ್ಕೆ ಒತ್ತು ನೀಡಿದೆ. ಅತ್ಯಂತ ನುರಿತ ಹಾಗು ತಂಡಗಳು ವಿಂಡೋಸ್ ಮತ್ತು ಲಿನಕ್ಸ್ ಪರಿಸರದ ಅಡಿಯಲ್ಲಿ ವೆಬ್ ತಂತ್ರಜ್ಞಾನಗಳ ನಿರ್ವಹಿಸುವುದಕ್ಕಾಗಿ ಹೆಚ್ಚಿನ ಪರಿಣತಿಯನ್ನು ಹೊಂದಿರುತ್ತವೆ. ಎಲ್ಲಾ ನಮ್ಮ ವೆಬ್ ಪೋರ್ಟಲ್ W3C ಜೋತೆ ವೃತಿಪರತ್ತೆಯನ್ನು ಹೊಂದಿದ್ದು ಹಾಗೂ ಸರ್ಚ್ ಉತ್ತಮತೆಯನ್ನು ಒದಗಿಸಲು ,ಸುಲಭವಾಗಿ ಬಳಸವ ಅರ್ಥಗರ್ಭಿತ ಸಂಪರ್ಕಸಾಧನಗಳನ್ನು ಹೊಂದಿದೆ.

ಇವತ್ತಿನ ಕ್ರಿಯಾತ್ಮಕ ಜಗತ್ತಿನಲ್ಲಿ ವೆಬ್ ಪೋರ್ಟಗಳು ಎಲಾ ಕಾಲದಲ್ಲು ಚಾಲನೆಯಲಿದ್ದುಕೊಂಡು ಪ್ರಸ್ತುತ ಮಾಹಿತಿಯನ್ನು ಜನಸಾಮಾನ್ಯರಿಗೆ ಒದಗಿಸಬೆಕಾಗಿದೆ. ಈ ನಿಟ್ಟಿನಲ್ಲಿ ವೆಬ್ ಮರು ವಿನ್ಯಸಗೊಳುಸುವಿಕ್ಕೆ ಮತ್ತು ಗ್ರಾಹಕರಿಗೆ ಹಾಗೊ ಬಳಕೆದಾರರ ಅಗತ್ಯಗಳ ಬದಲಾವಣೆ ಸಮಸ್ಯಗಳ ಪೊರೈಕೆಗೆ ಕಿಯೋನಿಕ್ಸ್, ಅಸ್ತಿತ್ವದಲ್ಲಿರುವ ನುರಿತ ಅನುಬವಿ ತಂಡವು ಪೋರ್ಟಲ್ ವೆಬ್ಸೈಟ್ ನಿರ್ವಹಣೆ ಮತ್ತು ಮರು ವಿನ್ಯಾಸ ಕೆಳಸಗಲನ್ನು ತೆಗೆದುಕೊಳ್ಳುತ್ತದೆ.ವೆಬ್ ನಿರ್ವಹಣಾ ಸೇವೆ ಪರಿಷ್ಕರಣೆ ಮತ್ತು ನಿರ್ವಹಣೆ ಹಾಗೊ ಪುಟ ಸೇರ್ಪಡೆ, ಸರ್ಚ್ ಎಂಜಿನ್ ಆಪ್ಟಿಮೈಸೇಶನ್, ವೆಬ್ಲಾಗ್ ಉಪಕರಣಗಳ ಮತ್ತು ಮುಂತಾದ ಸೇವೆಗಳುನ್ನು ನೀಡುತ್ತಲಿದೆ.

ಅಭಿವೃದ್ಧಿಪಡಿಸಲು ASP, PHP, JSP, AJAX, XML ಹಾಗೊ HTML ಮತ್ತು ವಿನ್ಯಸಗೊಳಿಸಲು ಅಡೋಬ್ ಫೋಟೋಶಾಪ್, ಡ್ರೀಮ್ವೇವರ್, ಫ್ರಂಟ್ಪೇಜ್ ಉಪಕರಣಗಳನ್ನು ಬಳಸಿಕೊಳುತ್ತೆವೆ. ಗ್ರಾಹಕರ ಅಗತ್ಯಗಳಿಗೆ ಅವಲಂಬಿಸಿ ಪರಿಹಾರಗಳನ್ನು ಡೇಟಾಬೇಸ್ ಬಳಸಿ ಮತ್ತು ವೆಬ್ ಪರಿಹಾರಗಳನ್ನು ಬಳಸಲು ಸರ್ವರ್ಗಳ ಶ್ರೇಣಿಯಿಂದ MySQL, PostGre, MSSQL ವಿವಿಧ ಸರ್ವರ್ ಡೇಟಾಬೇಸ್ ಬೆಂಬಲವನ್ನು ಒದಗಿಸಲಾಗುತ್ತದೆ. Joomla, Drupal ಮತ್ತು ವರ್ಡ್ಪ್ರೆಸ್ ಮುಕ್ತ ಮೂಲ ತಂತ್ರಜ್ಞಾನಗಳು ವ್ಯಾಪಕವಾದ ಬಳಕೆಗಾಗಿ ವಿಷಯ ಚಾಲಿತ ಪೋರ್ಟಲ್ ಬಳಸಲಾಗುತ್ತದೆ.

ಗ್ರಾಹಕರ ಪರವಾಗಿ, ನಾವು ಅನೇಕ ಹೋಸ್ಟಿಂಗ್ ಸೇವೆಗಳನ್ನು ಒದಗಿಸುತ್ತೆವೆ. ಕಿಯೋನಿಕ್ಸ್ ,ಅನುಕೂಲ ವರ್ಗ-ಎ ಸೇವಾದಾರರೊಂದಿಗೆ ಹಂಚಿಕೆಯ ಹೋಸ್ಟಿಂಗ್, ಮೀಸಲಾದ ಹೋಸ್ಟಿಂಗ್ ,ನಿಕಟ ಪುನರ್ನಿರ್ಮಾಣ ಕೆಲಸ ,ಸಹ ಸ್ಥಳ, ನಿರ್ವಹಿಸಿದ ಹೋಸ್ಟಿಂಗ್. ಇದಲ್ಲದೆ, ನಾವು ಕೆಲವು ಹೆಸರಿಸಲು ಬ್ಯಾಕ್ ಅಪ್ ಸರ್ವರ್, ಇಮೇಲ್ ಸಂರಚನಾ ಮತ್ತು ನಿರ್ವಹಣೆ, ವೆಬ್ ಸರ್ವರ್ ಸಂರಚನಾ, ಡೇಟಾಬೇಸ್ ಸರ್ವರ್ಗಳ ಪ್ರದೇಶಗಳಲ್ಲಿ ಸೇವೆಗಳನ್ನು ನಿರೂಪಿಸಲಾಗುತ್ತದೆ.